ಎರಡು ಕವಿತೆಗಳು _ ರಚೀ ಚಿತ್ರದುರ್ಗ _ ಪ್ರಸ್ತುತ ಸ್ಥಿತಿ ಗತಿ

ಮನಸ್ಸು ಮರ್ಕಟವಾಗದಿರಲಿ.... ೧

ಯಾರಿಗೂ ಅಸ್ತ್ರವಾಗದಿರಿ
ನಿಮ್ಮಂತೆ ನೀವು ನೀವಾಗಿರಿ 
ಕೂಡಿ ಆಡಿದ ಕ್ಷಣಗಳೊಮ್ಮೆ 
ಕೀಟಲೆ ತುಂಟಾಟವಾಡಿದೊಮ್ಮೆ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ನಕ್ಕಿಲ್ಲವೇ ನಿಮ್ಮೊಂದಿಗೆ ಬೆರೆತುಕೂಡಿ 
ಕುಣಿದಿಲ್ಲವೇ ತಾಳ ಬೆರೆತು ಜೋಡಿ
ಸ್ನೇಹಕ್ಕೆ ಮಿಡಿದಿಲ್ಲವೇ ಜೀವನಾಡಿ
ನಿಮ್ಮ ಕಣ್ಣೀರಿಗೆ ಕಣ್ಣೀರ ಬೆರೆಸಿಲ್ಲವೇ 
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ಇಂದು ಬಂದವರು ಯಾರೋ 
ದಿನಂಪ್ರತಿ ಜೊತೆಗಿದ್ದವರೋ 
ಸ್ನೇಹವನ್ನು ವಜ್ರದಂತೆ ಹೊಳೆಸಿರಿ
ನಿಮ್ಮಾತ್ಮದಲ್ಲೊಮ್ಮೆ ಬೆರೆಸಿರಿ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ಈಸು ದಿನವಿಲ್ಲದ ಗೋಜೇಕೆ 
ಹಾಸು ಹೊಕ್ಕಾಗಿ ಓದೋಕೆ 
ಸಂಗಾತಿಗಳೇ ಶತೃಗಳೇಕೆ
ಕೆಂಪಾದವು ಕಣ್ಣುಗಳೇಕೆ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ಅರಾಜಕತೆಯ ವಿರೋಧಿಸಿರಿ
ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿರಿ
ಜಾತೀಯತೆ ಅಸಮಾನತೆ ಕೊಲ್ಲಿರಿ
ನಿರುದ್ಯೋಗ ಸಮಸ್ಯೆಗೆ ಹೋರಾಡಿರಿ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ಅಮೂಲ್ಯ ಜೀವನ ವಿದ್ಯಾರ್ಜನ ಕ್ಷಣ
ಜ್ಞಾನವೃದ್ಧಿಗೊಳಿಸಿಕೊಳ್ಳುವ ಈ ಕ್ಷಣ
ತಯಾರಿ ನಡೆಸಿ ಪರೀಕ್ಷಾ ಸ್ಪರ್ಧೆಗಳು ಕಠಿಣ 
ಅಗತ್ಯವಿದೆ ವಿದ್ಯೆಗೆ ವಿನಯ ವಿವೇಕ ಪೂರ್ಣ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ಮನಸ್ಸು ಸೂರೆಗೊಳ್ಳದಿರಲಿ ಆಕ್ರೋಶಕ್ಕೆ
ಜೊತೆಗಿದ್ದವರ ಮೇಲೆರಗಿರದಿರಿ ಆಕ್ರಮಣಕ್ಕೆ
ಎಲ್ಲರೂ ನಮ್ಮವರೆಂದೆಣಿಸಿ ತಬ್ಬಿಕೊಳ್ಳಿ ತೆಕ್ಕೆ 
ಮನ್ನಿಸಿ ತಾಳ್ಮೆ‌ ಸನ್ನಡತೆ ಸಹಬಾಳ್ವೆ ಸ್ನೇಹಕ್ಕೆ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....

ನಮ್ಮ ಭಕ್ತಿಗೆ ಬಿಲ್ವಪತ್ರೆ  ಇಷ್ಟ
ಅವರಿಗೆ ಬಿರಿಯಾನಿ ಸ್ವಾದಿಷ್ಟ 
ಅವರಂತೆ ಅವರಿಷ್ಟ ಇವರಂತೆ ಇವರಿಷ್ಟ
ಬದುಕಿ ಬದುಕಲು ಬಿಡಿ ಅದಕ್ಕೇನು ನಷ್ಟ
ಸ್ಮರಿಸಿಕೊಳ್ಳಿರಿ ಸದ್ಯಕ್ಕೆ ಮತ್ತೊಮ್ಮೆ....
_ ರಚೀ ಚಿತ್ರದುರ್ಗ....

*******************************

ಮನಸ್ಸು ಮೌನವಾಗದಿರಲಿ....೨

ಎಲ್ಲೆಲ್ಲೋ ಭಂಡಬಿದ್ದು ಬೀದಿಲಿ ನಿಂತು
ಅವಮಾನಕ್ಕೊಳಗಾಗುವುದೇಕೆ...? 
ಮನೆಯಲ್ಲಿ ಅಪ್ಪಾಮ್ಮರಲ್ಲಿ ಕೇಳಿ
ಸಮವಸ್ತ್ರ ಸಾಕೆಂದು ಓದೋಕೆ...

ಅದಕ್ಕಾಗಿ ಹೋರಾಟ ಬಿಡಿ
ನಿಮ್ಮ ಸ್ವಾತಂತ್ರ್ಯವನ್ನು
ಕತ್ತಲಲ್ಲಿ ಕಟ್ಟಿಹಾಕಬಿಡಿ
ನಿಜ ಅರಿ ನಿಮ್ಮ ಬದುಕು ಇಡಿ..

ಶಾಲಾ ಮಂದಿರ ಎಲ್ಲರಿಗೊಂದೆ
ಸಮಾನತೆಯ ಪ್ರತೀಕ ಸಮವಸ್ತ್ರ
ಕಾಲ ಬದಲಾಗಿದೆ ಬಯಲಿಗೆ ಬನ್ನಿ
ಎಲ್ಲರೊಳೊಗೊಂದಾಗುವುದೇ ಶ್ರೇಷ್ಠ...

ತತ್ವಗಳು ಸಿದ್ಧಾಂತಗಳು ವಿಸ್ತರಿಸಿ
ಬಣ್ಣಬಣ್ಣದ ಲೋಕ ಬಣ್ಣಿಸೇ 
ಬಣ್ಣದೊಳೊಳು ನೀ ಕೂಡಿ ಬಾಳು
ಕಲಿಯಲು ಕೆಲವು ತ್ಯಾಗ ಅನಿವಾರ್ಯ...

ಕತ್ತಲೆಯೊಳಗೆ ಇದ್ದಿದ್ದು ಸಾಕು ಹೊರಬನ್ನಿ
ಜಗತ್ತು ಸುಂದರ ತಾಣ ನೋಡಿಯೊಮ್ಮೆ 
ಓದುವ ಸಕಾಲದಲ್ಲಿ ಸ್ಪಂದಿಸಿ ಹೊಸ ನೀತಿ
ಪದವಿ ಪಡೆಯುವ ಸಲುವಾಗಿ ಕೆಲ ತ್ಯಾಗ ಮುಖ್ಯ

ಯಾಕಿಷ್ಟು ವ್ಯಾಮೋಹ ತಮ್ಮುಡುಗೆಯ ಮೇಲೆ
ಸಾಲದೇ ಎಲ್ಲರಂತೆ ಒಂದೇ ತರಹದ ಉಡುಪು
ಕೆಟ್ಟನೋಟಗಳಿಲ್ಲ ಕೆಟ್ಟ ಹೆಸರಿಡುವವರಿಲ್ಲ
ಒಂದಾಗಿ ಕೂಡಿ ಸ್ನೇಹದಿ ಓದು ಬರಹ ಬಹುಮುಖ್ಯ..

_ ರಚೀ ಚಿತ್ರದುರ್ಗ

Comments

  1. ಈ ಕವಿತೆ ಯಾರಿಗೂ ಅರ್ಥವಾಗಲಿಲ್ಲ.
    ಒಳ್ಳೆಯ ಉದಾಹರಣೆ ಇದೆರ

    ReplyDelete

Post a Comment