ಮೂರು ಜ್ಞಾನ ಜ್ಯೋತಿಗಳು
ಅಂದು ರಾಜ್ಯ ಸಂಪತ್ತು, ರಾಜತ್ವವನ್ನೇ ತೊರೆದು ಸತ್ಯದ ಹುಡುಕಾಟದಲ್ಲಿ ಅರಸನಾಗಬೇಕಾದವನು ಬಿಕ್ಷುಕನಾದ ಮಹಾತ್ಮ ಸಿದ್ಧಾರ್ಥ. ಸಿದ್ಧರಾಜ ಬುದ್ಧನಾಗಿ ಲೋಕದ ಸುಖವನ್ನು ತೃಣಕ್ಕೆ ಸಮಾನವಾಗಿ ಕಂಡು ಸರಳ ರೀತಿಯಲ್ಲಿ ಬಿಕ್ಕುವಾಗಿ ಜ್ಞಾನದ ಹೊಳೆಯನ್ನೇ ಜಗತ್ತಿಗೆ ಹಂಚುತ್ತಾ ಅನೇಕ ಮಹಾರಾಜಾದಿಗಳನ್ನು ಸಹ ಲೌಕಿಕ ಸುಖದ ವಿರಾಗಿಯಾಗಿಸಿ ಸತ್ಯ ನಿಷ್ಠೆಯಿಂದ ಬದುಕುವಂತೆ ಮಾಡಿದ ಮಹಾತ್ಮ ಪುರುಷ ಬೌದ್ಧ ಧರ್ಮವನ್ನು ಸ್ಥಾಪಿಸಿದರು. ರಾಜದ ಸುಖದ ಸುಪ್ಪತ್ತಿಗೆಯನ್ನೇ ತೊರೆದು ಜಗತ್ತಿನ ತುಂಬಾ ಅಜ್ಞಾನವನ್ನು ತೊಳೆದು ಹಾಕಲು ನಿಸ್ವಾರ್ಥದಿಂದ ಕೊನೆಯುಸಿರು ಇರುವವರೆಗೂ ದೇಶ ವಿದೇಶಗಳ ಪ್ರವಾಸ ಮಾಡಿ ಬೌದ್ಧ ಧರ್ಮದ ಮೂಲಕ ಕಟುಕರನ್ನು ಮನುಷ್ಯರನ್ನಾಗಿಸಿದರು. ವೈದಿಕ ಧರ್ಮದ ಅನಿಷ್ಠ ಪದ್ದತಿಗಳನ್ನು ವಿರೋಧಿಸಿದರು. ಸಮಾನತೆ ಮಾನವೀಯ ಮೌಲ್ಯಗಳನ್ನು ಸಾರಿದರು.
ಅಂದು ಬಸವಣ್ಣನವರು ಸಮಾಜದ ಉದ್ಧಾರಕ್ಕಾಗಿ ಪ್ರಧಾನಮಂತ್ರಿ ಸ್ಥಾನವನ್ನೇ ತೊರೆದು ಎಲ್ಲಾ ಶ್ರಮಿಕರ, ದಲಿತರ, ಮಲ ಹೊರುವ ಜನರ, ಚಪ್ಪಲಿ ಹೊಲೆಯುವ ಜನರ, ಕಮ್ಮಾರ, ವಡ್ಡರ, ಸಮಾಗಾರರ, ಇನ್ನೂ ಅನೇಕ ಕೆಳವರ್ಗದ ಜನರನ್ನು ಸೇರಿಸಿ “ಕಾಯಕ”ವನ್ನೇ ಗುರಿಯಾಗಿಟ್ಟುಕೊಂಡು ದುಡಿಮೆಯನ್ನೇ ತಾಯಿಯೆಂದು ಪರಿಗಣಿಸಿ “ಅನುಭವ ಮಂಟಪ”ವನ್ನು ಸ್ಥಾಪಿಸಿ ಕಲ್ಲು ದೇವರ ಪೂಜೆಯನ್ನು ವಿರೋಧಿಸಿ ವೈದಿಕ ಧರ್ಮದ ಅಂಧಕಾರ ಮೂಢನಂಬಿಕೆಗಳನ್ನು ದಿಕ್ಕರಿಸಿ ಎಲ್ಲರ ಮನದಲ್ಲೂ ಅರಿಷಡ್ವರ್ಗಗಳನ್ನು ಸುಡಿಸಿ ಜಾತಿ ಪದ್ದತಿಯನ್ನು ತೊಳೆದು ಲಿಂಗ ದೀಕ್ಷೆಯನ್ನು ಕೊಟ್ಟು “ಕಾಯಕವೇ ಕೈಲಾಸ”ವೆಂದು ಸಾರಿ “ಲಿಂಗಾಯತ” ಧರ್ಮವನ್ನು ಸ್ಥಾಪಿಸಿ ಹೊಸ ಧಾರ್ಮಿಕ ಕ್ರಾಂತಿಯನ್ನೇ ಮಾಡಿದರು. ಅಂಗೈಲಿ ಲಿಂಗವ ಪೂಜಿಸುತ ಸರ್ವರಲ್ಲೂ ಸಮಾನತೆ ತರಲು ಇಮ್ಮಡಿ ಬಿಜ್ಜಳನ ಆಸ್ಥಾನದ ಪ್ರಧಾನಮಂತ್ರಿ ಸ್ಥಾನವನ್ನೇ ತೊರೆದು ಜಗಜ್ಯೋತಿಯಾಗಿ ವಚನಗಳ ಮೂಲಕ ಅನೇಕ ಶರಣರ ಸಾಹಿತ್ಯದಿಂದ ಕನ್ನಡ ಸಾಹಿತ್ಯದ ಬಗೆಯನ್ನೇ ಬದಲಿಸಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯಲು ಆರಂಭಿಸಿದರು. ಅಂತಹ ನಾಡು ನುಡಿ ಸಂಸ್ಕೃತಿಯನ್ನು ನಾವು ಕೈಮುಗಿದು ಪಾಲಿಸಬೇಕು...
ಅಂದು ಪಂಡಸೆ ಹಾಗೂ ಅಂಬೇಡ್ಕರ್ ಬ್ರಾಹ್ಮಣ ಗುರುಗಳ ಪ್ರೀತಿ ಗಳಿಸಿದ್ದ ಭೀಮ ಜಗತ್ತಿನಲ್ಲಿಯೇ ಇಂದಿಗೂ ಮೀರಿಸುವವರಿಲ್ಲದ ಹಾಗೆ ಓದಿದ ಭೀಮ ಬ್ರಿಟಿಷ್ ಸರ್ಕಾರದ ವತಿಯಿಂದ ಅತೀ ದೊಡ್ಡದಾದ ಹುದ್ದೆಯನ್ನು ಪಡೆದು ಸುಖವಾಗಿ ಬದುಕಬಹುದಿತ್ತು. ಆದರೆ ಅಂತಹ ಸುಖ ಬಯಸದೆ ಅಬಲರ,ದಲಿತರ, ಬ್ರಾಹ್ಮಣರೇತರ ಸಮುದಾಯದವರಿಗೆ ಮತದಾನ ಮಾಡಲು ಅನೇಕ ಬ್ರಾಹ್ಮಣರ ವಿರುದ್ಧ ಹೋರಾಡಿ ಮತದಾನ ಮಾಡಲು ಅವಕಾಶ ನೀಡಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿ ಗೌತಮ ಬುದ್ಧರ ಹಾಗೂ ಬಸವಣ್ಣನವರ ಆಶಯವನ್ನು ಪೂರ್ತಿಗೊಳಿಸಿದರು. ಪ್ರತೀ ಜಾತಿಗೂ ಮೀಸಲಾತಿ ನೀಡಿದರೂ ಕೆಲವು ಸವರ್ಣೀಯರು ಕೆಳವರ್ಗದ ಜನರ ಏಳಿಗೆಯನ್ನು ಮಾತ್ರ ಸಹಿಸದೆ ಇರುವ ಸಮಯದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಸರ್ವರಿಗೂ ಹಕ್ಕು ಬಾಧ್ಯತೆಗಳನ್ನು ಪಡೆಯಲು ಜೀವನವನ್ನು ಹಾಗೂ ಜೀವವನ್ನೇ ಪಣವಾಗಿಟ್ಟು ಹೋರಾಡಿದರು.
ಸರ್ವರೂ ಸಮಾನರು ಎಂಬ ಅಭಿಪ್ರಾಯ ಅಭಿಮತವನ್ನು ಹೊಂದಿರುವ ಈ ಮೂರು ಜ್ಯೋತಿಗಳು ಜ್ಯೋತಿಷ್ಯ ಶಾಸ್ತ್ರವನ್ನು ವಿರೋಧಿಸಿ ಕಾಯಕಕರ್ಮ ಶಿಕ್ಷಣ ಸಂಘಟನೆಗಳನ್ನು ಪ್ರತಿಪಾದಿಸಿ ಜಗತ್ತಿನಲ್ಲಿ ಈ ಮೂರೂ ಜನರೂ ತ್ಯಾಗಮಯಿಗಳಾದರು ....
ಜೈ ಬುದ್ಧ- ಜೈ ಬಸವ - ಜೈ ಭೀಮ್
_ ರಚೀ ನೇಸರ

Comments
Post a Comment