==========================
ಲಾಟಿ ಬೆಳಗು
ನಾಟಿ ಸಸಿ ನೆಟ್ಟ ಅನಂತರ
ಬೆಳೆಯಬಲ್ಲುದೇ ಹೊಲದಲ್ಲಿ ಫಸುಲು!
ನಾನು ಎಂಬ ಸಸಿ ಎದೆಯಲ್ಲಿ
ನೆಟ್ಟೆಡೆ ಬೆಳೆಯಬಲ್ಲೆಯಾ ಅಮಲು ?
ಸಾಟಿ ಇಲ್ಲ ನೀನು ನಾನೆಂದು
ಬೀಗಿದಾಗ ಸತ್ಯಪಥದ ಹಾದಿಯಲ್ಲಿ
ಚಾಟಿ ಸೇವೆ ಸಲ್ಲಿಕೆ ನಿನಗೆಂದೂ
ಕರ್ತನಿಂದ ಬದುಕಿನ ಅಂತ್ಯದಲ್ಲಿ
ಲಾಟಿ ಬೆಳಗು ಇದ್ದಾಗಲೇ
ರಾಟಿ ಚಕ್ರ ಜೀವನ ಅರಿತು ಹಂಚು
ಚೂಟಿ ನೀನಾಗು ಸರ್ವರಲ್ಲೇ
ಧರ್ಮ ವೃಕ್ಷದ ನೆರಳಿನ ಮೊನಚು
ಯಾರಿಗಂಜದಿದ್ದರೂ ನಿನಗೆ ನೀ
ಅಂಜು ಅಂದಾಜಿನ ಬಾಜು ಬಿಡು
ಅಂಜಿದರೆ ಅಂಜುಬುರುಕನಾಗಲಾರೆ
ನೀನೇ ನಿನ್ನಾತ್ಮಕ್ಕೆ ಗೌರವ ಕೊಡು
_ ರಚನೆ:ರಚೀ ನೇಸರ
==========================
ಲಾಟಿ ಬೆಳಗು
ನಾಟಿ ಸಸಿ ನೆಟ್ಟ ಅನಂತರ
ಬೆಳೆಯಬಲ್ಲುದೇ ಹೊಲದಲ್ಲಿ ಫಸುಲು!
ನಾನು ಎಂಬ ಸಸಿ ಎದೆಯಲ್ಲಿ
ನೆಟ್ಟೆಡೆ ಬೆಳೆಯಬಲ್ಲೆಯಾ ಅಮಲು ?
ಸಾಟಿ ಇಲ್ಲ ನೀನು ನಾನೆಂದು
ಬೀಗಿದಾಗ ಸತ್ಯಪಥದ ಹಾದಿಯಲ್ಲಿ
ಚಾಟಿ ಸೇವೆ ಸಲ್ಲಿಕೆ ನಿನಗೆಂದೂ
ಕರ್ತನಿಂದ ಬದುಕಿನ ಅಂತ್ಯದಲ್ಲಿ
ಲಾಟಿ ಬೆಳಗು ಇದ್ದಾಗಲೇ
ರಾಟಿ ಚಕ್ರ ಜೀವನ ಅರಿತು ಹಂಚು
ಚೂಟಿ ನೀನಾಗು ಸರ್ವರಲ್ಲೇ
ಧರ್ಮ ವೃಕ್ಷದ ನೆರಳಿನ ಮೊನಚು
ಯಾರಿಗಂಜದಿದ್ದರೂ ನಿನಗೆ ನೀ
ಅಂಜು ಅಂದಾಜಿನ ಬಾಜು ಬಿಡು
ಅಂಜಿದರೆ ಅಂಜುಬುರುಕನಾಗಲಾರೆ
ನೀನೇ ನಿನ್ನಾತ್ಮಕ್ಕೆ ಗೌರವ ಕೊಡು
_ ರಚನೆ:ರಚೀ ನೇಸರ
==========================
Comments
Post a Comment